DistrictHaveriLatest

ಕೇಂದ್ರ ಸರ್ಕಾರದಿಂದ ರಾಜ್ಯಪಾಲರ ದುರ್ಬಳಕೆ

ಹಾನಗಲ್ : ಸಿಎಂ ಸಿದ್ದರಾಮಯ್ಯನವರು
ಕಂಡ ಪ್ರಮಾಣಿಕ ಆಡಳಿತಗಾರ,
ಅಹಿಂದ ನಾಯಕನ ವಿರುದ್ಧ ಕೇಂದ್ರ ಸರ್ಕಾರ
ಷಡ್ಯಂತರ ಮಾಡುತ್ತಿದೆ ಎಂದು ಕಾಂಗ್ರೆಸ್ ಯುವ ಮುಖಂಡರಾದ ಇರ್ಫಾನ್ ಮಿಟಾಯಿಗರ್ ತಿಳಿಸಿದ್ದಾರೆ.ಈ ಕುರಿತು ಪ್ರಕಟಣೆ ನೀಡಿರುವ ಅವರು,ರಾಜ್ಯಪಾಲರ ಅಧಿಕಾರ ದುರಪಯೋಗ ಮಾಡಿಕೊಳ್ಳುತ್ತಿದೆ. ಸಂವಿಧಾನಿಕ ಹುದ್ದೆಗೆ ಅಗೌರವ ತೋರುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ
ಪ್ರಾಸಿಕ್ಯೂಷನ್ ನೋಟಿಸ ನೀಡಿದರೆ ಉಗ್ರ ಹೋರಾಟವಾಗುತ್ತೆ.ಮುಡಾ ವಿಚಾರದಲ್ಲಿ
ಸಿಎಂ ಸಿದ್ದರಾಮಯ್ಯನವರು ಹಾಗೂ ಕುಟುಂಬ ನಿಯಮ ಬಾಹೀರವಾಗಿ ನಿವೇಶನ ಪಡೆದುಕೊಂಡಿಲ್ಲ.ಬಿಜೆಪಿ ತನ್ನ ಸರ್ಕಾರದ ಅವಧಿಯಲ್ಲಿ ನಿವೇಶನ ಹಂಚಿಕೆ ಮಾಡಿದೆ. ಇದೀಗ ಸಿದ್ದರಾಮಯ್ಯನವರ ವಿರುದ್ಧ ಷಡ್ಯಂತರ ರೂಪಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.ಕರ್ನಾಟಕದ ಜನತೆ ಸತ್ಯಕ್ಕೆ ಬೆಂಬಲಿಸುತ್ತಾರೆ.ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರ ಅಧಿಕಾರ ದುರುಪಯೋಗ ಮಾಡಿದಲ್ಲಿ ಅಹಿಂದ ವರ್ಗದ ಜನ ಸಿಡಿದೇಳುವುದು ನಿಶ್ಚಿತ ಎಂದು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial