
ಅಂಟಿ ಮೀಟ್‌ಗೆ ಹೊರಟ ಅಂಟಿ ಲವರ್‌ಗೆ ಗೂಸಾಮರಕ್ಕೆ ಕಟ್ಟಿ ವ್ಯಕ್ತಿಯ ಮೇಲೆ ಹಲ್ಲೆ; ಗಂಡ–ಸಹೋದರರಿಂದ ದೌರ್ಜನ್ಯ ಆರೋಪಬೆಳಗಾವಿ: ಅಂಟಿ ಮೀಟ್ ಮಾಡಲು ಹೊರಟಿದ್ದ ಯುವಕನ ಮೇಲೆ ಅಂಟಿ ಗಂಡ ಹಾಗೂ ಆಕೆಯ ಸಹೋದರರು ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಅಕ್ಷಯ ಕಲ್ಲಟಗಿ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಅಂಟಿಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪ ಇದೆ. ಮೂರು ಮಕ್ಕಳ ತಾಯಿಯಾಗಿರುವ ಅಂಟಿ, ರಾತ್ರಿ ಮೀಟ್ ಮಾಡಬೇಕು ಎಂದು ಅಕ್ಷಯನನ್ನು ಕರೆಸಿಕೊಂಡಿದ್ದಾಳೆ ಎನ್ನಲಾಗಿದೆ.

ಮೀಟ್‌ಗೆ ಹೊರಟಿದ್ದ ಅಕ್ಷಯನನ್ನು ದಾರಿ ಮಧ್ಯದಲ್ಲಿ ಅಂಟಿ ಗಂಡ ಹಾಗೂ ಆಕೆಯ ಸಹೋದರರು ತಡೆದು, ಮರಕ್ಕೆ ಕಟ್ಟಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಗಾಯಗೊಂಡ ಅಕ್ಷಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಘಟನೆ ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.ವರದಿ: ಡಾ. ರವಿ ಬಿ ಕಾಂಬಳೆ



