
ಹಾನಗಲ್ಲ : ಹೊಸ ವೃಂದ ನೇಮಕಾತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಿಗಾದ ಅನ್ಯಾಯ
ಸರಿಪಡಿಸಬೇಕು. ಮುಖ್ಯ ಗುರುಗಳ ಹುದ್ದೆಗೆ ಸೇವಾ ಜೇಷ್ಟತೆ ಮೇಲೆ ಬಡ್ತಿ ನೀಡಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಸೋಮವಾರ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಅರ್ಹತೆ ಆಧಾರದ ಮೇಲೆ ಪ್ರೌಢಶಾಲೆಗೆ ಬಡ್ತಿ ನೀಡಬೇಕು ಎಂಬ ಬೇಡಿಕೆ ಇಡೇರಿಕೆಗಾಗಿ ಹಾನಗಲ್ಲ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಸಿ.ಜಿ.ಪಾಟೀಲ, 2016 ಕಿಂತ
ಮೊದಲು ನೇಮಕಾತಿಯಾದ ಶಿಕ್ಷಕರಿಗೆ 1 ರಿಂದ 7 ತರಗತಿ ಪಾಠ ಮಾಡುವವರಿಗೆ ಅದೇ
ನಿಯಮ ಮುಂದುವರೆಸಬೇಕು. 2017 ರ ನಿಯಮ ಅನ್ವಯಿಸಬಾರದು. ಈ ಬಗ್ಗೆ
ಹಲವಾರು ಬಾರಿ ಸರಕಾರಿ ಮನವಿ ಸಲ್ಲಿಸಲಾಗಿದೆ. ಆದರೆ ಸರ್ಕಾರ ಇದನ್ನು ಪರಿಗಣಿಸಿಲ್ಲ.ಆ ಕಾರಣಕ್ಕೆ ರಾಜ್ಯ ಮಟ್ಟದಲ್ಲಿ ಮೊದಲ ಹೋರಾಟವಾಗಿ ಈ ಮನವಿ ಸಲ್ಲಿಸಲಾಗುತ್ತಿದೆ.ಸರ್ಕಾರ ಶೀಘ್ರ ನಮ್ಮ ಬೇಡಿಕೆ ಇಡೇರಿಸದಿದ್ದರೆ, ಬೀದಿಗಿಳಿದು ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.
ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ V. V.ಸಾಲಿಮಠ ಸಂಘದ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಚಲ್ಲಾಳ, ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ಬಡಿಗೇರ, ತಾಲೂಕು ಕಾರ್ಯದರ್ಶಿ ಮಖಬೂಲ ಲಿಂಗದಹಳ್ಳಿ, ವಿಜೇಂದ್ರ ಯತ್ತಿನಹಳ್ಳಿ, ಎಂ.ಎ.ಜಾಗೀರದಾರ,ಅನಿತಾ ಕಿತ್ತೂರ, ಮಹಾಬಳೇಶ್ವರ, ಎಸ್.ಟಿ.ಚಕ ಸಾಲಿ, ಸಂಧ್ಯಾ ಭಂಡಾರಿ, ನಿರ್ಮಲಾ ಮತ್ತೂರ, ಸಿರಿಗ್ ಗೋಡಿಹಾಳ, ಹರೀಷ ಮಹೇಂದ್ರ ಕರ, ಜಿ.ಜಿ.ನೂಲ್ಕಿ, ಎಂ.ಎ.ಲೋಹಾರ ಮೊದಲಾದವರು ಹಾಜರಿದ್ದರು.



