BelagaviCrimeDistrict

ವರದಿಗಾರರಿಗೆ ಸುಳ್ಳು ಮಾಹಿತಿ ನೀಡಿ ಸುದ್ದಿ ದಿಕ್ಕು ತಪ್ಪಿಸುವ ಪ್ರಯತ್ನ – ಸಾರ್ವಜನಿಕರಿಂದ ಗೊಂದಲಕ್ಕೆ ತೆರೆ

ಹುಕ್ಕೇರಿ – ವರದಿಗಾರರಿಗೆ ತಪ್ಪು ಮಾಹಿತಿ ನೀಡಿ ಸುದ್ದಿಯನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ದಿನಾಂಕ 1/1/2026 ಗುರುವಾರ ರಂದು ವಿಶ್ವ ದರ್ಶಿನಿ ದಿನಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ವಾಸ್ತವಕ್ಕೆ ದೂರವಾಗಿದ್ದು, ಪರಿಶೀಲನೆ ವೇಳೆ ಇದು ಸುಳ್ಳು ಮಾಹಿತಿಯ ಆಧಾರದ ಮೇಲೆ ಪ್ರಕಟವಾಗಿರುವುದು ತಿಳಿದು ಬಂದಿದೆ.

ಆನ್ಲೈನ್ ಪಡಿತರ ಚೀಟಿ ಮಾಹಿತಿಯನ್ನು ಪರಿಶೀಲಿಸಿದಾಗ, ಸಂಬಂಧಿಸಿದ ಪಡಿತರ ಚೀಟಿಯಲ್ಲಿ ಯಾವುದೇ ರೀತಿಯ ವ್ಯವಹಾರ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ಆದರೆ ವರದಿಗಾರರಿಗೆ ಹಳೆಯ ಪಡಿತರ ಚೀಟಿ ಅರ್ಜಿಯನ್ನು ತೋರಿಸಿ ಈ ಸುದ್ದಿಯನ್ನು ಮಾಡಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಈ ಕುರಿತು ಮಾಹಿತಿ ಪಡೆದ ಸಾರ್ವಜನಿಕರು ಸ್ವತಃ ಆನ್ಲೈನ್ ದಾಖಲೆಗಳನ್ನು ಪರಿಶೀಲಿಸಿ, ಸುದ್ದಿಯಲ್ಲಿ ಪ್ರಕಟವಾದ ವಿಷಯಗಳು ಸತ್ಯಕ್ಕೆ ವಿರುದ್ಧವಾಗಿವೆ ಎಂದು ತಿಳಿಸಿದ್ದಾರೆ. ಇದರಿಂದ ಕೆಲವರು ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸಲು ಪ್ರಯತ್ನಿಸಿರುವ ಅನುಮಾನ ಬಲವಾಗಿದೆ.ಸಾರ್ವಜನಿಕ ವಲಯದಲ್ಲಿ ಮೂಡಿದ್ದ ಗೊಂದಲಕ್ಕೆ ಇದೀಗ ತೆರೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಸುದ್ದಿ ಪ್ರಕಟಿಸುವ ಮೊದಲು ಸಂಬಂಧಪಟ್ಟ ದಾಖಲೆಗಳ ಸಮಗ್ರ ಪರಿಶೀಲನೆ ಅಗತ್ಯವೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ಜೊತೆಗೆ ಸುಳ್ಳು ಮಾಹಿತಿಯನ್ನು ಪಸರಿಸುವುದ ಸೂಕ್ತವಲ್ಲ ಎಂಬುದು ಸಾರ್ವಜನಿಕರು ಅಭಿಪ್ರಾಯವಾಗಿದೆ

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial