ಹಾವೇರಿ: ಭ್ರಷ್ಟಾಚಾರ ಹಾಗೂ ಕಪ್ಪು ಹಣದ ಬಗ್ಗೆ ಮಾತನಾಡುವ ಬಿಜೆಪಿ ಅದೇ ಕಪ್ಪು ಹಣವನ್ನು ದೇಶವನ್ನು ಕೊಳ್ಳೆ ಹೊಡೆದವರಿಗೆ ಚುನಾವಣೆ ಬಾಂಡ್ ಹೆಸರಲ್ಲಿ ಪಡೆದುಕೊಂಡಿರುವುದು ಕೇಂದ್ರದ ಬಿಜೆಪಿ ಸರಕಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಟೀಕಿಸಿದರು.

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಇಂತವರಿಂದ ಕಾಂಗ್ರೆಸ್‌ನವರು ಪಾಠ ಕಲಿಯುವಂತ ಅವಶ್ಯಕತೆ ಇಲ್ಲ.ನೀವು ಇದೇ ಪ್ರವೃತ್ತಿಯನ್ನು ಮುಂದುವರೆಸಿದರೆ, ರಾಜ್ಯದ ಜನರು ಬಿಜೆಪಿಯನ್ನು ಕಿತ್ತು ಹಾಕತಾರೆ.ಆದರೆ, ರಾಜ್ಯಪಾಲರ ಕಳೆದ ಎರಡ್ಮೂರು ವರ್ಷದಿಂದ ಉತ್ತಮ ಕೆಲಸ ಮಾಡತಾರೆ ಎಂದುಕೊಂಡಿದ್ದೆ. ಇವತ್ತು ದುರ್ದೈವದ ಸಂಗತಿ ಎಂದರೆ, ರಾಜ್ಯಪಾಲರ ಮುಂದೆ ಅವರದ್ದೆ ಪಕ್ಕ ಹಾಗೂ ಜೆಡಿಎಸ್ ಪಕ್ಷದ ಕುಮಾರಸ್ವಾಮಿ, ಮುರುಗೇಶ ನಿರಾಣಿ,ಜನಾರ್ಧನ ರೆಡ್ಡಿ,ಶಶೀಕಲಾ ಜೊಲ್ಲೆ ಅವರು ದೂರುಗಳ ಮೇಲೆ ದೂರುಗಳು ವರ್ಷದಿಂದ ಬಾಕಿ ಉಳಿದಿವೆ.
ಅದನ್ನೇ ಎಲ್ಲ ಬದಿಗೆ ಒತ್ತಿ,ಬೆಳಿಗ್ಗೆ ಒಬ್ಬ ದೂರು ಕೊಡತಾನೆ, ಸಂಜೆ ಕಾರಣ ಕೇಳಿ ನೋಟಿಸ್ ಕೊಡತೀರಿ.ಇವರು ಸಂವಿಧಾನದ ರಕ್ಷಕರಲ್ಲ, ಸಂವಿಧಾನದ ಭಕ್ಷಕರು ಎನ್ನಬೇಕಾಗಿದೆ. ಇಂತಹ ರಾಜ್ಯಪಾಲರ ಅಗತ್ಯ ರಾಜ್ಯಕ್ಕೆ ಇಲ್ಲ.ಕೇಂದ್ರದ ಬಿಜೆಪಿ ಸರಕಾರಕ್ಕೆ ನಾವು ಆಗ್ರಹ ಮಾಡುತ್ತೇವೆ,ಇಂತಹ ರಾಜ್ಯಪಾಲರ ಇಟ್ಟುಕೊಂಡು ಕರ್ನಾಟಕವನ್ನು ಅಲ್ಲೋಲ – ಕಲ್ಲೋಲ ಮಾಡುವುದನ್ನು ಯಶಸ್ವಿ ಮಾಡಲು ನಾವು ಬಿಡುವುದಿಲ್ಲ.ಇಡಿ ಕರ್ನಾಟಕ ಜನರು ಸಿದ್ದರಾಮಯ್ಯ ಅವರ ಪರವಾಗಿದೆ.ರಾಜ್ಯದ ಕಾಂಗ್ರೆಸ್ ಅವರ ಪರ ನಿಂತಿದೆ.ದೇಶದ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ಪರ ಬೆನ್ನಿಗೆ ನಿಂತಿದಾರೆ ಎಂದರು.
ಇಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ ಅವರು ನಾಯಕತ್ವದಲ್ಲಿ ಕರ್ನಾಟಕದ ತುಂಬಾ ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಮಯದಲ್ಲಿ ಹಾವೇರಿ ಜನರು ಇಲ್ಲಿ ಸೇರಿ ರಾಜ್ಯಪಾಲರಿಗೆ ಎಚ್ಚರಿಕೆ ನೀಡಿದ್ದೀರಿ.ನಾವು ಕೇಳೊದು ಇಷ್ಟೇ ರಾಷ್ಟ್ರಪತಿ ಅವರು ಇಂತಹ ರಾಜ್ಯಪಾಲರನ್ನು ದೇಶದ ಯಾವುದೇ ಮೂಲೆಯಲ್ಲಿ ನಿಯೋಜನೆ ಮಾಡಬಾರದು,ಇದರಿಂದ ಬಿಜೆಪಿಗೆ ಕೆಟ್ಟ ಹೆಸರು.ನಾವು ರಾಜ್ಯಪಾಲರು ನಡೆಯನ್ನು ಖಂಡಿಸಿ ರಾಷ್ಟ್ರಪತಿಯ ಶಾಂತಿಯುತವಾಗಿ ಮನವಿ ಸಂವಿಧಾನದ ಉಳಿಸುವ ಕೆಲಸ ಮಾಡೋಣ ಎಂದರು.
ಪ್ರತಿಭಟನೆಕಿಂತಾ ಮೊದಲು ನಗರದ ಮುರುಘರಾಜೇಂದ್ರ ಮಠದಿಂದ ಆರಂಭದ ಪ್ರತಿಭಟನಾ ರ್ಯಾಲಿ ನಗರದ ಪ್ರಮುಖ ರಸ್ತೆಯಲ್ಲಿ ಸಾಗಿ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿಧಾನಸಭೆ ಉಪ ಸಭಾಪತಿ ರುದ್ರಪ್ಪ ಲಮಾಣಿ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಸಚಿವ ಆರ್. ಶಂಕರ, ಶಾಸಕರಾದ ಯು.ಬಿ. ಬಣಕಾರ, ಶಾಸಕ ಹಾಗೂ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ನೆಹರು ಓಲೇಕಾರ, ಅಜ್ಜಂಪೀರ ಖಾದ್ರಿ, ಮುಖಂಡ ಎಸ್.ಆರ್. ಪಾಟೀಲ,ಗಡಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಸೋಮಣ್ಣ ಬೇವಿನಮರದ,ಮುಖಂಡರಾದ, ಎಂ.ಎಂ.ಮೈದೂರ,ಪ್ರಭು ಭಿಷ್ಟನಗೌಡ್ರ ಸೇರಿದಂತೆ ಮುಂತಾದವರು ಹಾಜರಿದ್ದರು.



