HaveriLatestNewsState

ಬಿರುಗಾಳಿ ಸಹಿತ ಬಾರಿ ಯಾಲಕ್ಕಿ ನಗರ ಅಲ್ಲೋಲ ಕಲ್ಲೋಲ: ಲಕ್ಷಾಂತರ ರೂ ಹಾನಿ

ಹಾವೇರಿ: ಹಾವೇರಿಯಲ್ಲಿ ಸುರಿದ ಬಿರುಗಾಳಿ ಸಹಿತ ಬಾರಿ ಮಳೆಗೆ ಸರಣಿ ಆವಾಂತರಗಳು ಸೃಷ್ಟಿಯಾಗಿವೆ.ಒಂದು‌ ಗಂಟೆಗೆ ಹೆಚ್ಚು ಸುರಿದ ಮಳೆಗೆ ಲಕ್ಷಾಂತರ ರೂ ಹಾನಿಯಾಗಿದೆ.

ಹಲವೆಡೆ ನೆಲಕಚ್ಚಿದ ವಿದ್ಯುತ್ ಕಂಬಗಳಿಂದ ವಿದ್ಯುತ್ ಪೂರೈಕೆಯಲ್ಲಿ ಅಡೆತಡೆಯಾಗಿದೆ. ಬೃಹತ್ ಮರಗಳು ನೆಲಕ್ಕೆ ಬಿದ್ದ ಹಿನ್ನೆಲೆ ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿವೆ.ತಾಲೂಕ ಆರೋಗ್ಯ ಇಲಾಖೆಯ ಆವರಣದಲ್ಲಿ ಬೃಹತ್ ಮರ ಬಿದ್ದಿದೆ.

ಶಿವಾಜಿ ನಗರದ ಮೊದಲ ಕ್ರಾಸ್ ನಲ್ಲಿ ನೆಲಕಚ್ಚಿರೋ ವಿದ್ಯುತ್ ಕಂಬದಿಂದ ರಸ್ತೆ ಬದಿಯಿದ್ದ 2 ಸ್ಕೂಟರ್ ಗಳು ಸಂಪೂರ್ಣವಾಗಿ ಜಖಂಗೊಂಡಿವೆ.
ಅಶ್ವಿನಿ ನಗರದಲ್ಲಿ ಉರುಳಿ ಬಿದ್ದಿರೋ ತೆಂಗಿನ ಮರದಿಂದ ಕಪೌಂಡ್ ಹಾನಿಯಾಗಿದೆ.
ಮನೆ ಮುಂದಿದ್ದ ವಿದ್ಯುತ್ ತಂತಿಯ ಮೇಲೆ ಬಿದ್ದ ಮರದಿಂದ ವಿದ್ಯುತ್ ತಂತಿ ಕಟ್ಟಾಗಿದೆ.

ಎಂ ಎಂ ಸರ್ಕಲ್ ನಲ್ಲಿ ನೆಲಕಚ್ಚಿದ ಬೃಹತ್ ಮರದಿಂದ ಎರಡು ಕಾರ್ ಗಳ ನುಜ್ಜುಗುಜ್ಜಾಗಿದೆ.ಹಾವೇರಿ ತಾಲೂಕಿನ‌ ಸಂಗೂರು ಗ್ರಾಮದಲ್ಲಿ ಗ್ರಾಮದ ಸರಕಾರಿ ಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ.

ಶಾಲೆಯ ಹಳೆ ಕಟ್ಟಡಕ್ಕಿದ್ದ ತಗಡಿನ ಮೇಲ್ಛಾವಣಿ ಹಾರಿದ್ದು,ಗೋಡೆ ಕುಸಿತಗೊಂಡದೆ.ಹಾವೇರಿ ಗುತ್ತಲ ರಸ್ತೆಯಲ್ಲಿ ಯತ್ತಿನಹಳ್ಳಿ ಬಳಿ ಉರುಳಿ ಬಿದ್ದ ಬೃಹತ್ ಮರಗಳಿಂದ ಒಂದು ಗಂಟೆಯಿಂದ ರಸ್ತೆ ಸಂಚಾರ ಬಂದ್ ಆಗಿ ಜನರು ಸಂಕಷ್ಟ ಎದುರಿಸಿದರು.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial