ChitradurgaCrimeDistrictGadagHaveriUncategorized

16 ತಿಂಗಳ ನಂತರ ಹೊರಬಂತು ಕೊಲೆ ರಹಸ್ಯ: ಹೂತಾಕ್ಕಿದ್ದ ಶವ ಹೊರತೆಗೆದ ಪೊಲೀಸರು:

ರಾಣೆಬೇನ್ನೂರು: ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳು, ಪೊಲೀಸರ ವಿಚಾರಣೆ ವೇಳೆ 16 ತಿಂಗಳ ಹಿಂದಿನ ಕೊಲೆ ರಹಸ್ಯ ಬಿಚ್ಚಿಟ್ಟಿರುವ ಘಟನೆ ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ‌ನಡೆಸಿದೆ.

ಜೈಲ್ ವಾರ್ಡನ್ ಜೊತೆ ಸೇರಿ ಸಹೋದರನಿಂದಲೆ ಕೊಲೆಯಾಗಿದ್ದವನ ಶವವನ್ನ ಪೊಲೀಸರು ಹೊರ ತೆಗೆದು,ಹಳೆ ಪ್ರಕರಣಕ್ಕೆ ಜೀವ ತುಂಬಿದ್ದಾರೆ.ರಾಮು, ಪ್ರಸಾದ್ ಮತ್ತು ಪ್ರದೀಪ್ ಮೂವರು ಒಡ ಹುಟ್ಟಿದವರು.ರಾಣೇಬೆನ್ನೂರ ನಗರ ನಿವಾಸಿಗಳಾಗಿದ್ದ ಇವರು, ಹಲವು ಕಳ್ಳತನ ಪ್ರಕರಣದಲ್ಲಿ ಭಾಗಿಯಾದ್ರು. ಒಟ್ಟಿಗೆ ಕಳ್ಳತನ ಮಾಡುತ್ತಿದ್ದ ಮೂವರು ಸಹೋದರರು ಕಳ್ಳತನ ಪ್ರಕರಣದಲ್ಲಿ ಚಿತ್ರದುರ್ಗ ಜೈಲಿನಲ್ಲಿದ್ರು. ಜೈಲಿನಲ್ಲಿದ್ದಾಗ ಜೈಲ್ ವಾರ್ಡನ್ ಶ್ರೀಕಾಂತ್ ಪರಿಚಯವಾಗಿತ್ತು.ಕಳ್ಳ ಸಹೋದರರ ವಿಶ್ವಾಸ ಗಳಿಸಿ, ಅವರ ಮೂಲಕ ಕಳ್ಳತನ ಮಾಡಿಸುತ್ತಿದ್ದ ವಾರ್ಡನ್ ಶ್ರೀಕಾಂತ ಮುಂದೆ ಸಹೋದರ ಕಳ್ಳರ ಟೀಂ ಸೇರಿದ್ದ. ಇತ್ತೀಚಿಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸರು ಕಳ್ಳತನ ಪ್ರಕರಣದಲ್ಲಿ ಇವರನ್ನು ಬಂಧಿಸಿದ್ರು. ಕಳ್ಳರ ಬಂಧನದ ವೇಳೆ ಆರೋಪಿಗಳು ಭಯಾನಕ ಸತ್ಯ ಹೊರಗಾಕಿದ್ದಾರೆ. ಕಳ್ಳರು ಬಾಯ್ಬಿಟ್ಟ ಸತ್ಯ ಕೇಳಿ ಲಕ್ಷ್ಮೇಶ್ವರ ಪೊಲೀಸರು ಹೌಹಾರಿದ್ದರು. ಹೌದು ಪೊಲೀಸರ ಮುಂದೆ 16 ತಿಂಗಳ ಹಿಂದಿನ ಕೊಲೆ ರಹಸ್ಯವನ್ನ ಇವರು ಬಾಯ್ಬಿಟ್ಟಿದ್ರು. ಹಣಕಾಸು ವಿಚಾರದಲ್ಲಿ ಸಹೋದರ ರಾಮು ಕೊಲೆ ಮಾಡಿದ್ದಾಗಿ ಪ್ರಸಾದ್ ಹಾಗೂ ಶ್ರೀಕಾಂತ ಒಪ್ಪಿಕೊಂಡಿದ್ದರು.

ಮೇ 10, 2023 ರಂದು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಹುಣಸಿಕಟ್ಟಿ ರಸ್ತೆಯಲ್ಲಿರುವ ಲೇಔಟ್ ನಲ್ಲಿ ಶ್ರೀಕಾಂತ್, ಪ್ರಸಾದ್ ಮತ್ತು ರಾಮು ಕುಡಿದು ಪಾರ್ಟಿ ಮಾಡ್ತಿದ್ರು. ಇದೆ ವೇಳೆ ಕಳ್ಳತನ ಮಾಡಿದ್ದ ಹಣಕಾಸು ವಿಚಾರದಲ್ಲಿ ಮೂವರ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಜೈಲ್ ವಾರ್ಡನ್ ಶ್ರೀಕಾಂತ್ ಜೊತೆಗೆ ಸೇರಿ ಸಹೋದರ ರಾಮುನನ್ನ ಪ್ರಸಾದ್ ಶ್ರೀಕಾಂತ ಕೊಲೆ ಮಾಡಿದ್ದರು. ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಣೇಬೆನ್ನೂರ ಗ್ರಾಮೀಣ ಠಾಣೆ ಪೊಲೀಸರು ಹೂತಿದ್ದ ಶವವನ್ಮ ಹೊರ ತೆಗೆದಿದ್ದಾರೆ. ಆರೋಪಿಗಳ ಸಮ್ಮುಖದಲ್ಲಿ ಶವ ಹೊರ ತೆಗೆದು ಶವ ಪರೀಕ್ಷೆ ನಡೆಸಿದ್ದಾರೆ.ಕಳ್ಳರ ಜೊತೆಗೆ ಸೇರಿದ್ದ ಜೈಲ್ ವಾರ್ಡನ್ ಕಳ್ಳತನದ ಹಣದ ವಿಚಾರದಲ್ಲಿ ಕೊಲೆಯನ್ನು ಮಾಡಿದ್ದಾನೆ. ಜೈಲ್ ವಾರ್ಡನ್ ಜೊತೆ ಸೇರಿ ಒಡಹುಟ್ಟಿದವನ ಉಸಿರನ್ನೆ ಸಹೋದರ ನಿಲ್ಲಿಸಿದ್ದ ಕೊಲೆ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial