DistrictHaveriLatestNationalNewsState

ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಈಗ ಸಂಪೂರ್ಣ ಪೇಪರ್ ಲೆಸ್ ಆಸ್ಪತ್ರೆ

ಹಾವೇರಿ : ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಇಡುತ್ತಿರುವ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಉತ್ತರ ಕರ್ನಾಟಕದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಪೇಪರ್ ಲೆಸ್ (ಕಾಗದ ಮುಕ್ತ) ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗಿದೆ. ಎಲ್ಲ ಸೇವೆಗಳು ಇನ್ನು ಮುಂದೆ ಡಿಜಲೀಕರಣದ ಮೂಲಕ ನಡೆಯಲಿವೆ.

ಈಗಾಗಲೇ ಶಿವಮೊಗ್ಗದಲ್ಲಿರುವ ನಮ್ಮ ಮುಖ್ಯ ಶಾಖೆ ಸರ್ಜಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕಾಗದ ರಹಿತವಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಸ್ಥಾಪನೆಯಾದ ದಿನದಿಂದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಪರಿಸರ ಚಟುವಟಿಕೆಗಳನ್ನು ಮಾಡುತ್ತ ಬರುತ್ತಿದೆ.

ಆಸ್ಪತ್ರೆಗೆ ಬರುವ ಒಳ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್‌ಲೈನ್ ಮೂಲಕ ಒದಗಿಸಲಾಗುತ್ತದೆ.

ಜಗತ್ತಿನಲ್ಲಿ ಅಂದಾಜಿನ ಪ್ರಕಾರ ಪ್ರತಿ 2 ಸೆಕೆಂಡ್ ಗೆ 1 ಮರ ಪೇಪರ್ ಉತ್ಪಾದನೆ ಸಲುವಾಗಿ ಕಟಾವು ಆಗುತ್ತಿದೆ. ಒಂದು ಟನ್ ಪೇಪರ್ ತಯಾರಿಕೆಗೆ 24 ಮರಗಳನ್ನು ಕಡಿಯಬೇಕಾಗುತ್ತದೆ. ಭಾರತದಲ್ಲಿ ಒಂದು ವರ್ಷಕ್ಕೆ 40.5 ಕೋಟಿ ಟನ್ ಪೇಪರ್ ಉತ್ಪಾದನೆ ಆಗುತ್ತಿದೆ.

8,333 A4 ಶೀಟ್‌ಗಳನ್ನು ತಯಾರಿಸಲು ನಾವು ಒಂದು ಸಂಪೂರ್ಣ ಮರವನ್ನು ಕಡಿಯಬೇಕಾಗುತ್ತದೆ.

ನಮ್ಮ ಆಸ್ಪತ್ರೆಗೆ ಅಂದಾಜು ತಿಂಗಳಿಗೆ 1 ಲಕ್ಷದ 74 ಸಾವಿರ A4 ಶೀಟ್ ಬಳಸಲಾಗುತ್ತಿತ್ತು. ಈಗ ಡಿಜಿಟಲಿಕರಣವಾದ ಮೇಲೆ ಪೇಪರ್ ಬಳಸುವುದು ಸಂಪೂರ್ಣ ನಿಲ್ಲಿಸಿದ್ದೇವೆ ಇದರಿಂದ ನಾವೂ ತಿಂಗಳಿಗೆ 21 ಮರಗಳಲ್ಲಿ ಉಳಿಸಿದಂತಾಗುತ್ತದೆ.

ಮೊದಲು ದಾಖಲಾತಿಗಳನ್ನು ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೆ ಕೊಟ್ಟು ಬರುವುದು ಹಾಗೂ ಅಲ್ಲಿಂದ ವಾಪಸು ಸಂಬಂಧಪಟ್ಟ ವೈದ್ಯರಿಗೆ ತೋರಿಸುವುದಕ್ಕೆ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಬಿಲ್ಲಿಂಗ್ ವಿಭಾಗ ಅಥವಾ ಎಂ ಆರ್ ಡಿ, ಪ್ರಯೋಗಾಲಯ ಹೀಗೆ ಪ್ರತಿಯೊಂದು ವಿಭಾಗಕ್ಕೆ ಅಲೆದಾಡುವ ಸಮಯ ಕಡಿಮೆ ಆಗುತ್ತದೆ.

ರೋಗಿಗಳ ಜೊತೆಗೆ ಬಂದವರಿಗೆ ರಿಪೋರ್ಟ್ ತೆಗೆದುಕೊಂಡು ಬರುವುದಾಗಲಿ ಹೋಗಬೇಕಿಲ್ಲ, ಆ ಆತಂಕ, ಗಾಬರಿ, ಗಡಿಬಿಡಿ ಅವರಿಗೆ ಇರುವುದಿಲ್ಲ. ಎಲ್ಲ ರಿಪೋರ್ಟ್ ಗಳೂ ಟ್ಯಾಬ್ ಮೂಲಕ ಆಯಾ ವಿಭಾಗಕ್ಕೆ ರವಾನೆ ಆಗಿರುತ್ತದೆ.ಏಕ ಕಾಲದಲ್ಲಿ 4 ರಿಂದ 5 ಜನ ವಿವರಗಳನ್ನು ದಾಖಲಿಸಬಹುದು ಹಾಗೂ ವೀಕ್ಷಣೆ ಮಾಡಬಹುದು.

ಪತ್ರಿಕಾಗೋಷ್ಠಿಯಲ್ಲಿ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಮಧು ಕೆ.ಆರ್, ವೈದ್ಯಕೀಯ ಅಧೀಕ್ಷಕರಾದ ಡಾ.ರಾಘವಾಂಕ, ಮೂಳೆ ರೋಗ ತಜ್ಞವೈದ್ಯರಾದ ಡಾ.ನವೀನ್ ಸಿ.ಆರ್, ತುರ್ತು ನಿಗಾ ಘಟಕ ತಜ್ಞವೈದ್ಯರಾದ ಡಾ. ರಾಕೇಶ್ ಎಂ.ಕೆ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞವೈದ್ಯರಾದ ಡಾ.ಚೇತನ್ ಕೆ.ಎಂ, ಮಕ್ಕಳ ತಜ್ಞವೈದ್ಯರಾದ ಡಾ.ಸಚಿನ್ ಸಿ ಯು, ರೇಡಿಯೋಲಜಿಸ್ಟ್ ಡಾ ಲಿಖಿತಾ ಆರ್, ಡಿ ಸ್ಕ್ರಿಬ್ ನ ಸಹ ಸಂಸ್ಥಾಪಕರಾದ ಕಾರ್ತಿಕ್, ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ರಂಜಿತಾ ಬಸೇಗಣ್ಣಿ, ಆಡಳಿತಾಧಿಕಾರಿಗಳಾದ ಚೈತ್ರ ಗೌಡ, ಸಹಾಯಕ ಆಡಳಿತಾಧಿಕಾರಿಗಳಾದ ಪ್ರವೀಣ್ ಚರಂತಿಮಠ್ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
Wordpress Social Share Plugin powered by Ultimatelysocial