
ಹಾನಗಲ್: ಹಾನಗಲ್ ತಾಲೂಕಿನ ಕಿರವಾಡಿಯಲ್ಲಿ ಸುಮಾರು 55 ವರ್ಷದ ಮಹಿಳೆಯೋರ್ವಳು ಅನುಮಾನಸ್ಪದ ರೀತಿಯಲ್ಲಿ ಮೃತ ಪಟ್ಟ ಘಟನೆ ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮೇಲ್ನೋಟಕ್ಕೆ ಮಹಾ ಮಳೆಗೆ ಮನೆ ಗೋಡೆ ಹಾಗೂ ಮೇಲ್ಚಾವಣಿ ಬಿದ್ದು ಅಜ್ಜಿ ಸಾವನ್ನಪ್ಪಿದ ಬಗ್ಗೆ ಮಾಹಿತಿ ಲಭ್ಯವಾಗಿದ್ದು,ಶಾಂತವ್ವ ತಳವಾರ್ (55) ಎಂದು ತಿಳಿದು ಬಂದಿದೆ.ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮನೆ ಗೋಡೆಯ ಒಳಗೆ ಮಳೆ ನೀರು ಸೇರಿದ ಪರಿಣಾಮ ಮನೆ ಗೋಡೆ ಹಸಿಯಾಗಿ ಬಿದ್ದಿದೆ.ಹಾನಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.



